Friday, 13 March 2026

ಗಾದೆ ಮಾತುಗಳು

1. ಕೈ ಕೆಸರಾದರೆ ಬಾಯಿಗೆ ಮೊಸರು!
 Work is worship
2. ಕಬ್ಬು ಡೊಂಕಾದರೆ ಸಿಹಿ ಡೊಂಕೇ?

3. ಆಕಳು ಕಪ್ಪಾದರೆ ಹಾಲು ಕಪ್ಪೆ?

4. ಕುಣಿಯೋಕ್ ಬರ್ಲಿಲ್ಲ ಅಂದ್ರೆ ನೆಲ ಡೊಂಕು ಅಂದ್ರಂತೆ!!

5. ಊರ ಚಿಂತೆಗೆ ಮುಲ್ಲಾ ಸೊರಗಿದoತ!!
ಬಸವಣ್ಣನವರು ವಚನ
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನೆರೆ ಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ!!

6. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡ ಅಂತ!

7. ಕನ್ನಡಿಯೊಳಗಿನ ಗಂಟಿಗಿಂತ ಕೈಯಲ್ಲಿರೋ ಪುಡಿಗಾಸು ಲೇಸು!!

8. ಬೀಸಲಾರದಾಕಿ ಅಳೆದು ಅಳೆದು ನೋಡಿದಳಂತ!!

9. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ!!
सौ सोनार का एक लोहार का!!

10. ಸುರಗಿ ಮನೆಯಾಕಿ ಸುರಗಿ ಹಾಕ್ಕೋಂಡರ ನೆರೆಮನೆಯಾಕಿ ಉರಲು ಹಾಕ್ಕೋಂಡಳಂತ

11.ಒಡಕನ್ನ ಮೆತ್ತಲಾಸಲ್ಲ ಬಡಕಗ ಬಡಸಲಾಸಲ್ಲ

12. ಹಾವು ಸಣ್ಣದು ಅನ್ನಬಾರದು ಗಂಡ ಒಳ್ಳೇವನು ಅನ್ನಬಾರದು!!

13. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು!!
Maraathi - 
दिस्त तस नस्त म्हणून जग फ़
14. ಬೆಳ್ಳಗಿರುವುದೆಲ್ಲ ಹಾಲಲ್ಲ!!
All that glitters is not gold!

15. ಹೊಟ್ಟೆ ತುಂಬಿಂದ ಹುಗ್ಗಿ ಮುಳ್ಳು ಮುಳ್ಳು!!

16. ಓತಿಕಟಕ್ಕ ಬೇಲಿ ಸಾಕ್ಷಿ!!

17. ಬೇಲಿಯೇ ಎದ್ದು ಹೊಲ ಮೇದಂತೆ!

18. ಕಳ್ಳನ್ನ ನಂಬಿದರೂ ಕುಳ್ಳನ್ನ ನಂಬಬಾರದು

19. ಗಿಡವಾಗಿ ಬಗ್ಗದು ಮರವಾಗಿ ಬಗ್ಗೀತೆ?
 A stitch in time saves nine

20. ಬೆಳೆಯುವ ಸಿರಿ ಮೊಳಕೆಯಲ್ಲಿ!

21. ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು!

22. ಮಂದಿಯೊಳಗೆ ಹೊಡೆದು ಸಂದಿಯೊಳಗೆ ಕಾಲು ಬಿದ್ದರಂತ!

23. ಕಾರ್ಯವಾಸಿ ಕತ್ತೆ ಕಾಲು ಹಿಡಿದರಂತ!

24. ಆರು ಕೊಟ್ಟರೆ ಅತ್ತೆ ಕಡೆ ಮೂರು ಕೊಟ್ಟರೆ! ಸೊಸೆ ಕಡೆ!

25. ಹನಿ ಹನಿ ಕೂಡಿದರೆ ಹಳ್ಳ!

26. ಒಗ್ಗಟ್ಟಿನಲ್ಲಿ ಬಲವಿದೆ!

27. ಇಬ್ಬರಿದ್ದರೆ ಏಕಾಂತ ಮೂವರಿದ್ದರೆ ಲೋಕಾಂತ!

28. ಕುದಿಯೋ ವರೆಗೂ ನಿಂತು ಅರಳುವರೆಗೆ ನಿಲ್ಲಲಿಲ್ಲಂತ!

30. ಪಾಪಿಗೆ ಸಮುದ್ರದಲ್ಲೂ ಮೊಣಕಾಲಗಂಟೇ ನೀರು!

31. ನಾಲಗೆಗೆ ಯಲಬಿಲ್ಲ!

32. ಅಂಗಾಲಿಗೆ ಹೇಸಿಗೆ ಇಲ್ಲ!

33. ಗಂಗೆಗೆ ಶೀಲ ಇಲ್ಲ!

34. ಕದ್ದು ಹೋಳಿಗೆಗೆ ಬೆಲ್ಲ ಇಲ್ಲಂದ್ರಂತ! 

35. ಬೋರಗಲ್ಲ ಮೇಲೆ ನೀರು ಸುರಿದರಂತ!

36. ಹೊಳೆಯಲ್ಲಿ ಹುಣಸೆ ಹಣ್ಣು ತೊಳದರಂತ!

37. ಕೋಣನ ಮುಂದೆ ಕಿನ್ನೂರಿ ಬಾರಿಸಿದ್ರಂತ!

38. ಸಹವಾಸ ದೋಷ!!

39. ಎಮ್ಮೆ ಕೂಡ ಆಡಿ ಆಕಳು ಹೊಲಸು ತಿಂತಂತೆ!
ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ
ದುರ್ಜನರ ಸಂಗವು ಬಚ್ಚಲಿನ 
ರೊಚ್ಚಿನಂತಿಹುದು ಸರ್ವಜ್ಞ

40. ಬರಬರುತ್ತಾ ರಾಯರ ಕುದರೆ ಕತ್ತೆ ಆಯಿತು!

41. ಮಾಡಿದವರ ಪಾಪ ಆಡಿದವರ ಬಾಯಲ್ಲಿ!

42. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವಂತ!

43. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂದ್ರಂತೆ!

44. ಆಯ್ಕೊಂಡ ತಿನ್ನೋ ಕೋಳಿ ಕಾಲ ಮುರಿದರಂತ!!

44. ಆರು ಹಡೆದಾಕಿ ಮುಂದ ಮೂರು ಹಡೆದಾಕಿ ತೋಡಿಕೊಂಡಳಂತೆ!

45. ಕೈಲಾಗದವ ಮೈ ಪರಚಗೊಂಡಂತೆ!

46. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ!
The grass at the other end is always greener!
Die kirschen in der nachbarts garten smelt immer susser!!
47. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

48. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರ ಅಲೆದರಂತೆ!

49. ಬಗಲಲ್ಲಿ ಕೂಸ ಇಟ್ಕೊಂಡ ಊರೆಲ್ಲ ಹುಡುಕಿದರಂತ!

50. ಛಡಿ ಛಂ ಛಂ ವಿದ್ಯಾ ಘಂ ಘಂ!

51. ಉಪ್ಪು ತಿಂದ ಮೇಲೆ ನೀರು ಕುಡಿಲೇ ಬೇಕು!

52. ಉಂಡ ಮನೆಗೆ ಎರಡು ಬಗೆಬಾರದು!

53. ಉರಿಯುದಕ್ಕ ತುಪ್ಪ ಸುರಿದರಂತ!

54. ಉಗರಿಲೆ ಹೋಗುದಕ್ಕ ಕೊಡಲಿ ತಂದರಂತೆ!

55. ಹಾಲಿಂದು ಹಾಲಿಗೆ ನೀರಿಂದು ನೀರಿಗೆ!
दूध का दूध पनिका पानी!

56. ಹೂವಿನ ಜೊತೆ ದಾರನೂ ಸ್ವರ್ಗಕ್ಕ ಹೋಯಿತಂತೆ!

57. ದೀಪದ ಬುಡದಲ್ಲಿ ಕತ್ತಲೇ!

58. ಅಡ್ಡ ಗೋಡೆ ಮೇಲೆ ದೀಪ ಇಟ್ಟಂಗೆ!

59. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ!

60. ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ!

61. ಮನಸಿದ್ದಲ್ಲಿ ಮಾರ್ಗ!
Where there is a will there is a way!!

62. ಬಡವನ ಕೋಪ ದವಡೆಗೆ ಮೂಲ!

63. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ!

64. ಕಾಗೆ ಕೈಲಿ ಕಛೇರಿ ಕೊಟ್ಟರೆ, ಕಛೇರಿ ತುಂಬ ಹೊಲಸು ಮಾಡಿತಂತೆ!

65. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡ್ಕೊಂಡಂತೆ!

66. ಮಳೆ ನಿಂತ ಮೇಲೆ ಕೊಡೆ ಭಾರ!

67. ಹೊಳೆ ದಾಟಿದಮೇಲೆ ಅಂಬಿಗನೇಕೆ??

68. ನಂಬಿ ಕೆಟ್ಟವರಿಲ್ಲ!

69. ಒಡ್ಡರಾಕಿ ಕುಬುಸ ಕದ್ದರಂತೆ!

70. ಆಳಾಗಿ ದುಡಿ ಅರಸನಾಗಿ ಉಣ್ಣು!

71. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲೋದಿಲ್ಲ!

72. ಅಕ್ಕನ ಬಂಗಾರ ಬಿಡೋಲ್ಲ ಅಕ್ಕಸಾಲಿಗ!

73. ಕಡಲೆ ಇದ್ದಾಗ ಹಲ್ಲು ಇಲ್ಲ, ಹಲ್ಲು ಇದ್ದಾಗ ಕಡಲೆ ಇಲ್ಲ!

74. ಶೆಟ್ಟಿ ಕೂಡಿಟ್ಟಿದ್ದು ಯಾರಿಗೆ??
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದೆ
ಕಟ್ಟಿಹುದು ಬುತ್ತಿ - ಸರ್ವಜ್ಞ

75. ಊರಿಗೊಂದು ಆದರ ಉಡಾಫೆಗೆ ಒಂದು!

77. ಎಲ್ಲರ ಮನೆ ದೋಸೆ ತೂತು!

78. ಎತ್ತು ಏರಿಗೆ ಕೋಣ ಕೇರಿಗೆ!

79. ಅತಿ ಆದರೆ ಅಮೃತನೂ ವಿಷ!

80. ಉಂಡು ಉರಿ ಅಂದ್ರೆ ಉಪವಾಸ ಉರಿದರಂತೆ!

81. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ!

82.  ಹಾಡುತ್ತಾ ಹಾಡುತ್ತಾ ರಾಗ ಉಗುಳುತಾ ಉಗುಳುತಾ ರೋಗ!

83. ಸಾಯೋದರ ಮೇಲೊಂದು ಮೇಯೋದು!

84. ಕೊಚ್ಚೆಯಲ್ಲಿ ಕಲ್ಲು ಎಸೆದು ಮೈಯಗೆ ಸಿಡಿಸಿಕೊಂಡರಂತೆ!

86. ಅಲ್ಪರ ಸಂಗ ಅಭಿಮಾನ ಭಂಗ!

87. ದುಷ್ಟರ ಕಂಡರೆ ದೂರವಿರು!

88. ಹೇಳೋಕೆ ಶಾಸ್ತ್ರ ತಿನ್ನೋಕೆ ಬದನೆಕಾಯಿ!

89. ಉಪ್ಪಿಲ್ಲದೆ ಉರಿ ಅಂದ್ರೆ ಎಣ್ಣಿ ಇಲ್ಲದ ಗೊಂದಲ ಹಾಕಿದರಂತ!

90. ಬೆಕ್ಕು ಇಲ್ಲದ ಮನೇಲಿ ಇಲಿ ಲಾಗ ಹಾಕಿತಂತೆ!

91. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

92. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
Every dog has its day!
Kalaya tasmai namaha!

93. ಗಂಗಾ ಸ್ನಾನ ತುಂಗಾ ಪಾನ!

94. ಆರೋಗ್ಯವೇ ಭಾಗ್ಯ!

95. ಆನೆ ಹೋಗ್ತಾ ಇರುತ್ತೆ ನಾಯಿ ಬೊಗಳ್ತ ಇರುತ್ತೆ!

96. ಮುಹೂರ್ತ ನೋಡಿ ಕೂಡಿದರ ಕುರುಡು ಮಗ ಹುಟ್ಟಿದಂತೆ!

97. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ!

99. ಕೋಳಿ ಕೇಳಿ ಮಸಾಲೆ ಅರಿಯುವುದುಂಟೆ!

100. ಹಸಿದು ಹಣ್ಣು ತಿನ್ನು ಉಂಡು ಕಬ್ಬು ತಿನ್ನು!

101. ಹೂಂ ಅಂದ್ರೆ ಹುಣಸೇ ಮರ ದಾಟಿತಂತೆ!

102. ಅಲ್ಪ ವಿದ್ಯಾ ಮಹಾ ಗರ್ವಿ!

103. ಚೋರ ಗುರು ಚಂಡಾಳ ಶಿಷ್ಯ!

104. ಸಂಕಟ ಬಂದಾಗ ವೆಂಕಟರಮಣ!

105. ಜಾಣನಿಗೆ ಮಾತಿನ ಪೆಟ್ಟು ಕತ್ತೆಗೆ ಲತ್ತೆ ಪೆಟ್ಟು!

106. ಇಬ್ಬರ ಜಗಳ ಮೂರನೆಯವನಿಗೆ ಲಾಭ!

107. ಆನೆ ಹೋಗ್ತಾ ಇರುತ್ತೆ ನಾಯಿ ಬೊಗಳ್ತ ಇರುತ್ತೆ!

108. ಬೊಗೋಳೋ ನಾಯಿ ಕಚ್ಚೋದಿಲ್ಲ!

109. ಕಡಕೋಳ ನಾಯಿ ಎಡತಾಕಿ ಸತ್ತಂತ!
धोभी का कुत्ता न घरका न घाटका!

110. ಗುಡ್ಡಕ್ಕ ನಾಯಿ ಒದರಿ ಒದರಿ ಸತ್ತಂತ!

111. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ!

112. ಮಂತ್ರಕ್ಕಿಂತ ಉಗುಳೇ ಹೆಚ್ಚು!

113. 

Tuesday, 10 March 2026

ಒಗಟುಗಳು

1. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿ ನಿಂಗಣ್ಣ - ಬಾಳೆಹಣ್ಣು
2. ಗುಡ್ಡದ ಮೇಲೆ ಒಂದು ಗುಣಕಲ್ಲು - ತುರುಬು 
3. ಹಸಿರು ಗಿಡಕ್ಕ ಮೊಸರು ಗುಜ್ಜಾರ್ - ಹತ್ತಿ
4. ಗಿಡಗಿಡಕ್  ಕುಡಗೋಲು ಜೋತು ಬಿಟ್ಟಾರ್ - ಹುಣಸೇಹಣ್ಣು
5. ನಡು ಸಣ್ಣ ನಾಗರ ಬಣ್ಣ ಹಿಡಿಯೋಕ್ ಹೋದರೆ ಕಡಿಯೋಕ್ ಬರುತ್ತೆ - ಕಣಜೀರಿಗೆ ಹುಳ
6. ಅಪ್ಪನ ರೊಕ್ಕ ಏನಿಸೋಕಗಲ್ಲ ಅವ್ವನ ಸೀರೆ ಮಡಿಚೋಕಾಗಲ್ಲ - ನಕ್ಷತ್ರ ಆಕಾಶ
7. ಕಾಲಿಲ್ಲದ ಕುಂಟ ಸರ ಸರ ಹೋಗ್ತಾನ - ಹಾವು
8. ಪೇಟೆಯಿಂದ ತರೋದು, ಮುಂದ ಇಟ್ಕೊಂಡು ಅಳೋದು - ಈರುಳ್ಳಿ
9. ಊರೆಲ್ಲ ಅಡ್ಡಾಡಿ ಬಂದು ಮೂಲೇಲಿ ಕೂಡುತ್ತೆ - ಚಪ್ಪಲಿ
10. ಬಿಳಿ ಎತ್ತು ಮುಳುಗುತ್ತೆ ಕರಿ ಎತ್ತು ತೇಲುತ್ತೆ - ಸಕ್ಕರೆ ಚಹಾಪುಡಿ
11. ಮಣಿಯಲ್ಲ ಅಡ್ಡಾಡಿ ಬಂದು ಮೂಲೇಲಿ ಕೂಡುತ್ತೆ - ಪೊರಕೆ
12. ತೆಲ್ಪನೆ ಹುಡುಗಿಗೆ ಒಂದೇ ಕಣ್ಣು - ಸೂಜಿ

Saturday, 7 March 2026

ಮಂಗಳ!

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

ಮಹಾದೇವನಿಗೆ ।।ಪ।।

ಬನ್ನಿಯ ಎಲಿಯಾಗ 

ಹನ್ನೊಂದಾರುತಿ ಮಾಡಿ

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೧।।

ಆಲದ ಎಲಿಯಾಗ 

ಅರವತ್ತೊಂದ ಏಡಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೨।।

ನಿಂಬಿಯ ಎಲಿಯಾಗ 

ತುಂಬಿದಾರುತಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೩।।

----------------------------------------------

----------------------------------------------

ಕರ್ಪೂರಾರುತೀ ಬೆಳಗಿರೆ 

ಕಾರುಣ್ಯ ಮೃಗಾಹಾರ ದೇವಗೆ 

ನೀಲಕಂಠನ ನಿಜಮಗೋಚರ 

ಭಾಲಚಂದ್ರ ಭರಣಗೆ ।।ಪ|| 

ಬಾಲೆಗೊಲಿದನು ಹಾಲಸವಿದನು 

ಲೋಲ ಶ್ರೀ ಗುರುರಾಯಗೆ ।।೧।।

ವಾರಿಜೋದ್ಭವ ಶಿರವ ಹರಿದನು 

ಮದಹರ ಮಹಾದೇವಗೆ 

ಘೋರ ತಾಪವ ದೂರಮಾಡುವ 

ಶೂರ ಷಣ್ಮುಕ ನಯ್ಯಗೆ ।।೨।।

ಶರಣು ಜನಕೆ ವರವನಿತ್ತನು 

ಪರಮ ಪಾರ್ವತಿ ಅರಸಗೆ 

ಧರೆಯೊಳಗೆ ಅಧಿಕವಾದ 

ಸೊನ್ನದ ಸಿದ್ಧರಾಮಗೆ ।।೩।।


ಓಂ ಚೈತನ್ಯಮ್ ಶಾಶ್ವತಂ ಉಮಾತೀತಂ ನಿರಂಜನಂ 

ನಾಗಬಿಂದು ಕಾಲಾತೀತಂ ತಸ್ಮೈಶ್ರೀ ಗುರುವೇ ನಮಃ ।।    

----------------------------------------------

----------------------------------------------

ಜ್ಞಾನಪೂರಣಂ ಜಗಜ್ಯೋತಿ 
ನಿರ್ಮಲವಾದ ಮನವೇ ಕರ್ಪೂರದಾರುತೀ ।।ಪ।।

ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ 
ಜನನ ಮರಣರಹಿತ ಜಂಗಮಕೆ ಬೆಳಗಿರೆ ।।೧।।

ನಾನೀನೆಂಬುದ ಬೀಡೀರಿ 
ಸದ್ಗುರು ಪ್ರಾಪ್ತಿಗಿ ಜ್ಞಾನಿಗಳೊಡನಾಡಿರಿ 
ಸ್ವಾನುಭವದ ಸುಖ ತಾನೇ ಕೈ ಸೇರುವುದು 
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ।।೨।।

ನಾನಾ ಜನ್ಮದ ಕತ್ತಲೆ 
ಕಳೆದಳಿದು ಬೇಗ 
ಮಾನವ ಜನ್ಮದ ಬೆಳಕಿನಲಿ 
ಹೀನ ವಿಷಯದಾಸೆ ಹಿಂದುಳಿದು ಗುರುವಿನ 
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ।।೩।।

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ 
ಹುಟ್ಟಿ ಬರುವದು ದುರ್ಲಭವು 
ಕೋಟ್ಟಾನೆ ಗುರು ಎನಗೆ ಮುಟ್ಟಿದ ಫಲದಿಂದ 
ಹುಟ್ಟಿದ ಮಗ ಸಿದ್ಧನ ಹೆಸರಿಟ್ಟು ಬೆಳಗಿರೆ ।।೪।।
 
----------------------------------------------

----------------------------------------------