ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರ
ಬೋರಗಲ್ಲ ಮೇಲೆ ಮಳೆ ಹುಯಿದರ ನೀರ
ಹೀರ್ಕೊಂಬುದುoಟೆ ಸರ್ವಜ್ಞ
2.
ಓದಿದ ಓದೇಲ್ಲ ಮೇದ ಕಬ್ಬಿನ ಹಿಪ್ಪೆ
ಓದಿದ ಓದನರಿತರೆ ಆ ಹಿಪ್ಪೆ
ಆದ ಕಬ್ಬಂತೆ ಸರ್ವಜ್ಞ
3.
ಸತ್ಯರ ನುಡಿ ತೀರ್ಥ ನಿತ್ಯರ ನಡೆ ತೀರ್ಥ
ಉತ್ತಮರ ಸಂಗಮವದು ತೀರ್ಥ
ಹರಿವ ನೀರೆತ್ತನ ತೀರ್ಥ ಸರ್ವಜ್ಞ
4
ಕೇಳುವುದುಳ್ಳೋಡೆ ಹೇಳುವುದು ಬುದ್ಧಿಯನು
ಕೊಳದಲಿ ಬಿದ್ದು ಬಳಲುವಗೆ ಬುದ್ಧಿಯನು
ಹೇಳುವ ನೆಗ್ಗ ಸರ್ವಜ್ಞ
5.
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ
6.
ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ
ಹೊತ್ತಿಗೋದಗದ ಮಾತು ಕೈ ಜಾರಿದ ಮುತ್ತಿನಂತಿಹುದು ಸರ್ವಜ್ಞ
7.
ಹಸಿವಿಲ್ಲದುಣಬೇಡ ಹಸಿದು ಮತ್ತಿರಬೇಡ
ಬಿಸಿಗೂಡಿ ತಂಗಳುಣಬೇಡ ವೈದ್ಯನ
ಬೆಸಸಲೆ ಬೇಡ ಸರ್ವಜ್ಞ