ಉಳವಿಯ ಬಸವಣ್ಣ ಉಳಿಯೋ ನಮ್ಮನಿಯಾಗ
ನೀರ ಕಾದಾವೀಗ ಜಳಕಕ ನೀರ ಕಾದಾವೀಗ ।।ಪ।।
ನೀರನೇ ಕಾದಾವೋ ಜಳಕಕ್ಕ ನಮ್ಮ ಬಸವ
ಹಾಲ ಕಾದವೀಗ ಕುಡಿಯಾಕ ಹಾಲ ಕಾದಾವೀಗ ।।೧।।
ಎಡಕ ಅಡಕಿಯ ವನ ಬಲಕ ಬಾಳೆಯ ಬನ
ನಡಕ ನಮ್ಮ ಬಸವಣ್ಣ ನೆಲೆಸ್ಯಾನ ನಮ್ಮ ಬಸವಣ್ಣ ।।೨।।
ನಿಂಬಿಯ ಗಿಡ ಹುಟ್ಟಿ ಲಿಂಗಕ್ಕೆ ನೆರಳಾಗಿ
ಬಂದ ಜಂಗಮರೀಗೆ ಬಸವಣ್ಣ ಬಂದ ಜಂಗಮರೀಗೆ ।।೩।।
ಬಸವಣ್ಣ ಹುಟ್ಟಲಿ ಹೊಸ ಪ್ಯಾಟೆ ಕಟ್ಟಲಿ
ರಸಬಾಳೆಯ ಕಬ್ಬ ಚಿಗಿಯಲಿ ರಸಬಾಳೆಯ ಕಬ್ಬ ।।೪।।
ರಸಬಾಳಿ ಕಬ್ಬ ಚಿಗಿಯಲು ಕಣಕಿಕೊಪ್ಪ
ಬಸವಣ್ಣನ ತೇರ ಎಳೆಯಲಿ ಬಸವಣ್ಣನ ತೇರ ।।೫।।
No comments:
Post a Comment